May 30, 2026

ಸ್ವಗ್ರಾಮ ನರಸಿಂಹಗಿರಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ತಮ್ಮ ಸ್ವಗ್ರಾಮ ಹಾಗೂ ಎಳೂರುಗುಡ್ಡ ಎಂದೇ ಪ್ರಖ್ಯಾತಿ ಪಡೆದ ನರಸಿಂಹಗಿರಿಯಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಸಾವಿರಾರು ಜನರ ಕುಂದುಕೊರತೆಗಳನ್ನು ಆಲಿಸಿದರು.

ಪ್ರತಿದಿನದಂತೆ ಅಂದು ಸಹ ಬೆಳಗ್ಗೆಯಿಂದ ಸಂಜೆಯವರೆಗೆ ಕ್ಷೇತ್ರದ ವಿವಿಧ ಗ್ರಾಮಗಳಾದ ಮಂಗಾಪುರ, ಸಿದ್ದಯ್ಯನಹಟ್ಟಿ, ಜರ್ಮಲಿ, ಹಿರೇಕುಂಬಳಗುಂಟೆ, ಕಾತ್ರಿಕೆಹಟ್ಟಿ, ಎ. ದಿಬ್ಬದಹಳ್ಳಿ, ಕೂಡ್ಲಿಗಿ, ಕೆ. ರಾಯಾಪುರ, ಯರಗುಂಡ್ಲಹಟ್ಟಿ, ಹರವದಿ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಆಗಮಿಸಿದ ಮುಖಂಡರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿದರು. ಭೌಗೋಳಿಕ ನಕ್ಷೆಯ ಸಹಾಯದೊಂದಿಗೆ ಕ್ಷೇತ್ರದ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಅವರು, ರೈತರು, ಯುವಕರು ಮತ್ತು ಮಹಿಳೆಯರ ಮನವಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ರಾಜಕೀಯ ತಂತ್ರಗಾರಿಕೆಗಿಂತ ಅಭಿವೃದ್ಧಿಗೇ ಹೆಚ್ಚಿನ ಆದ್ಯತೆ ನೀಡಿರುವ ಶಾಸಕರು, ಕ್ಷೇತ್ರದ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ. ಅನಕ್ಷರತೆ, ಹಸಿವು, ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಹಾಗೂ ಉದ್ಯೋಗಕ್ಕಾಗಿ ಜನರು ಗುಳೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾವು ಸದಾ ಬದ್ಧರಾಗಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಈಗಾಗಲೇ ಹಲವಾರು ಬಾರಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿರುವ ಅವರು, ಜನರ ಮಾನವ ಅಭಿವೃದ್ಧಿ ಮತ್ತು ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಸ್ಥಳೀಯರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರಾದ ಕಾತ್ರಿಕೆಹಟ್ಟಿ ಗುರುಮೂರ್ತಿ, ಪಾಲಕ್ಷಿ, ದಳವಾಯಿ ಬೋರಣ್ಣ, ಡಾ. ಎತ್ತಿನ ಸಿದ್ದಣ್ಣ, ಗೊಂಚಿಕಾರು ಓಬಣ್ಣ, ಹರವದಿ ಈರಣ್ಣ, ರಾಮಚಂದ್ರ, ಎ. ದಿಬ್ಬದಹಳ್ಳಿ ಸಿದ್ದೇಶ, ಜರ್ಮಲಿ ದೊರೆ ಪಾಳೆಯಗಾರರ ಸಿದ್ದಪ್ಪ ನಾಯಕ, ಹಿರೇಕುಂಬಳಗುಂಟೆ ಮನೋಜ್, ಮೊರಬಹಳ್ಳಿ ಮಾರಪ್ಪ, ಮಂಗಾಪುರ ದೊಡ್ಡ ವೀರಪ್ಪ ಶಿಕ್ಷಕರು, ಎನ್. ಭೀಮಪ್ಪ, ಎಂ. ಭೀಮಪ್ಪ, ಚಂದ್ರಚಾರ್ಯ, ಚೆನ್ನ ಬಸಪ್ಪ, ಹೆಚ್. ಸಿದ್ದೇಶ, ಹೆಚ್. ದಡಾರಪ್ಪ, ಪಿ. ನಾಗರಾಜಪ್ಪ, ಎಂ.ಎಂ. ವಿರೇಶ ಕುಮಾರ್, ಎಂ. ಓಬಳೇಶ ಉಪಸ್ಥಿತರಿದ್ದರು.

ಅಲ್ಲದೆ ಕೆ. ರಾಯಾಪುರ ಕೃಷ್ಣಪ್ಪ, ಯರಗುಂಡ್ಲಹಟ್ಟಿ ವಕೀಲರಾದ ಪಾಪಣ್ಣ, ನರಸಿಂಹಗಿರಿ ಎಸ್. ವೆಂಕಟೇಶ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನ ಗೌಡ, ಜಿಂಕಲ್ ನಾಗಮಣಿ, ಬಷೀರ್ ಸಾಬ್, ಚಿಕ್ಕೋಬನಹಳ್ಳಿ ಪಾಪಣ್ಣ, ಜುಮ್ಮೋಬನಹಳ್ಳಿ ಜಿ. ಓಬಣ್ಣ, ಪಾಲನಾಯಕನಕೋಟೆ ಮಲ್ಲೇಶ, ಕಲ್ಲೇಶ, ಚಿರತಗುಂಡು ಟೈಲರ್ ನಾಗರಾಜ, ಪಸಲುಪಾಲಯ್ಯ, ನರಸಿಂಹಗಿರಿ ಹುಬ್ಬಳ್ಳಿ ವೆಂಕಟೇಶ, ಬಣವಿಕಲ್ಲು ಯರಿಸ್ವಾಮಿ, ಗುಡೇಕೋಟೆ ಕೆಇಬಿ ಗೋವಿಂದಪ್ಪ, ಮಡಕಲಕಟ್ಟೆ ಕೃಷ್ಣಪ್ಪ, ಹುಲಿಕೆರೆ ಡಾ. ಓಂಕಾರಪ್ಪ ಹಾಗೂ ವಿವಿಧ ಹಳ್ಳಿಗಳಿಂದ ಬಂದ ನೂರಾರು ರೈತರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!